ಕನ್ನಡದ ಮೊದಲ ಶಾಸನ : ತಾಳಗುಂದ ಶಾಸನ ಒಂದು ಕಿರು ನೋಟ
ಕನ್ನಡ ಭಾಷೆಯ ಲಿಖಿತ ಶಾಸನೋಕ್ತ ಪ್ರಾಚೀನತೆಯನ್ನು ಹಲ್ಮಿಡಿ ಶಾಸನಕ್ಕಿಂತಲೂ ಸುಮಾರು 80 ವರುಷಗಳ ಕಾಲ ಹಿಂದಕ್ಕೆ ಒಯ್ಯುವ ಮೂಲಕ ಕನ್ನಡ ಭಾಷೆಯ ಪ್ರಾಚೀನತೆಯನ್ನು ಇನ್ನಷ್ಟು ದೃಢಪಡಿಸಿದ ಶಾಸನ : ತಾಳಗುಂದ ಶಾಸನ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತಾಳಗುಂದದ ಶ್ರೀ ಪ್ರಣವೇಶ್ವರ ದೇವಾಲಯದ ಪ್ರಾಂಗಣದಲ್ಲಿ 2013-14ನೇ ಸಾಲಿನಲ್ಲಿ ಕೇಂದ್ರ ಪುರಾತತ್ವ ಇಲಾಖೆಯು ಪ್ರಾಯೋಗಿಕ ಉತ್ಖನನ ಕಾರ್ಯ ಕೈಗೊಂಡಿತ್ತು. ಆಗ ಸಿಂಹ ಕಟಾಂಜನ ರಚನೆ ದೊರೆತಿತ್ತು.ಅದರ ಪಾರ್ಶ್ವಭಾಗದಲ್ಲಿ ಕದಂಬರ ಕಾಲದ ಲಿಪಿ ಗೋಚರಿಸಿದ್ದು, ಅದು ಕನ್ನಡದ ಮೊದಲ ಶಾಸನವಾಗುವ ಲಕ್ಷಣ ಹೊಂದಿದೆ ಎಂದು ತಿಳಿಯಲಾಗಿತ್ತು. ಆ ಉತ್ಖನನ ಕ್ರಿಯೆಯ ಅಧ್ಯಯನ ನಾಯಕತ್ವವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ ಬೆಂಗಳೂರು ವಲಯದ ಆಗಿನ ಅಧೀಕ್ಷರಾಗಿದ್ದ ಶ್ರೀ Keshava Thirumalai ರವರು ವಹಿಸಿದ್ದರು. ಶ್ರೀಯುತರ ನಿರಂತರ ಅಧ್ಯಯನ ಹಾಗೂ ಕಾರ್ಯ ಧಕ್ಷತೆಯ ಪರಿಣಾಮವಾಗಿ 20l6 ರ ಕೊನೆಯಲ್ಲಿ ASI ಉತ್ಖನನ ಕ್ರಿಯೆಯ ವರದಿ ಪ್ರಕಟಿಸಿತು. ಆ ರಾಷ್ಟ್ರ ಮಟ್ಟದ ವರದಿಯ ಮುಖಪುಟವನ್ನು ಆವರಿಸಿದ್ದು ತಾಳಗುಂದದ ಚಿತ್ರ.
ವರದಿಯಲ್ಲಿ ಉತ್ಖನನದಲ್ಲಿ ಸಿಕ್ಕ ಶಾಸನವು ಕನ್ನಡ ಶಾಸನವಾಗಿದ್ದು ಅದರ ಕಾಲವನ್ನು ಕ್ರಿ.ಶ. 370 ರಿಂದ ಕ್ರಿಶ 400 ಎಂದು ತಿಳಿಸಲಾಗಿತ್ತು. ಅಂದರೆ ಶಾಸನವು ಈಗಿನ ಕನ್ನಡದ ಮೊದಲ ಶಾಸನವಾದ ಹಲ್ಮಿಡಿ ಶಾಸನ (ಕ್ರಿ.ಶ450)ಕ್ಕಿಂತಲೂ ಪೂರ್ವದ ಅವಧಿಯ ಶಾಸನ ಇದು ಎಂದು ತಿಳಿಯಬಹುದು.
ಇತ್ತೀಚಿಗೆ ಬನವಾಸಿಯಲ್ಲಿ ನಡೆದ ಕದಂಬೋತ್ಸವದಲ್ಲಿ ಉತ್ಖನನದ ಅಧ್ಯಯನಕಾರರಾದ ಹಾಗೂ ನಾಡಿನ ಪ್ರಸಿದ್ಧ ಸಂಶೋಧನಾಕಾರರಾದ ಶ್ರೀ ಕೇಶವಸರ್ ರವರು "ಕನ್ನಡದ ಮೊದಲ ಶಾಸನ" ಎಂಬ ಶೀರ್ಷೆಕೆಯಡಿ ಕನ್ನಡ ಭಾಷಾ ಪವಿತ್ರೆಯನ್ನು ಸಾರುವ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿದರು.
ಶಾಸನದ ಪಾಠ....
............... ವುಸ
.............ತ್ನೋಮಿಯಾ
.....ಕೊಟ್ಟಾರ್ ಪುಲೋನಾಗೇ ಸ್ಕ
..... ಯಾಮಾಂ ಚನ್ದ್ರಾದಿತ್ಯ
ಮೋಗಬೋಯ್ಗರಾ ನಾವಿದಾವಜೀ ನಾಗ (ಣ * )
ಪುಲಿ (ಣ್ಡ * )ಗೆಯಾ ಹಲಮಿ ಕೊಳ್ಳೆ ನಾಲ್ಕುಂ ಮಾಸೇ ತು
........ ಜಾ.... ಮಿ............. ಭೂ
ಸಾರಾಂಶ: ಚಂದ್ರಾದಿತ್ಯನ ಆಡಳಿತ ಕಾಲದಲ್ಲಿ ಕ್ಷೌರಿಕ ವೃತ್ತಿಯ ನಾಗಣ್ಣನಿಗೆ ನಾಲ್ಕು ಮಾಸ ಪರ್ಯಂತ ಅನುಭವಿಸಿಕೊಂಡು ಬರಲು ಪುಲಿಂದಿಗೆಯಲ್ಲಿ ಇನ್ನೂ ಉತ್ತಿರದ ಭೂಮಿಯನ್ನು ದಾನವಾಗಿ ನೀಡಲಾಗಿದೆ.
ಕೆಲವು ಶಾಸನಗಳ ಕಾಲವನ್ನು ಲಿಪಿಯ ಶೈಲಿ, ಭಾಷೆಯ ಆಧಾರದ ಮೇಲೆ ನಿರ್ಧಾರ ಮಾಡಬಹುದು. ಕೆಲವು ಶಾಸನಗಳ ಕಾಲವನ್ನು ಅವುಗಳನ್ನು ಹೊಂದಿಸಿರುವ , ಅಳವಡಿಸಿರುವ ಸ್ಥಳಗಳ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಿದೆ, ಆದರೆ ತಾಳಗುಂದದ ಶಾಸನ ತುಸು ಭಿನ್ನವಾಗಿದ್ದು ಸಾಂದರ್ಭಿಕ ಆಧಾರಗಳನ್ನು ಹಾಗೂ ಲಿಪಿಯ ಶೈಲಿಯ ಮೇಲೆ ನಿರ್ಧರಿಸಬೇಕಾಗುತ್ತದೆ.
ಈ ಶಾಸನದ ಅಕ್ಷರಗಳು ಕದಂಬ ಲಿಪಿಯನ್ನು ಹೋಲುತ್ತವೆ. ಮೇಲ್ನೋಟಕ್ಕೆ ಹಲ್ಮಿಡಿ ಶಾಸನದಂತೆ ಕಾಣುತ್ತವೆ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಶಾತವಾಹನ ಮತ್ತು ಕದಂಬರ ನಡುವಿನ ಲಿಪಿ ಎಂದು ಅರಿವಾಗುತ್ತದೆ. ಈ ಶಾಸನದ ಕಾಲನಿರ್ಣಯಕ್ಕೆ ಅನೇಕ ಪ್ರಾಚೀನ ಶಾಸನಗಳ ಲಿಪಿಗಳ ವಿನ್ಯಾಸವನ್ನು ಸುಮಾರು ಒಂದು ವರುಷಗಳ ಕಾಲ ಈ ಶಾಸನದ ಲಿಪಿಯೊಂದಿಗೆ ಮತ್ತೆ ಮತ್ತೆ ತುಲನಾತ್ಮಕ ಅಧ್ಯಯನ ಮಾಡಲಾಗಿದೆ. ಶಾಸನ ದೊರಕಿದ ಸ್ಥಳದಲ್ಲಿನ ಮಣ್ಣಿನ ಸ್ಥರಗಳ ಅಧ್ಯಯನ ಹಾಗೂ ದೊರೆತ ನಾಣ್ಯಗಳ ಆಳ ಇಂತಹ ಸೂಕ್ಷ್ಮ ವಿಚಾರಗಳನ್ನು ಸಹ ಕಾಲ ನಿರ್ಣಯಕ್ಕೆ ಪೂರಕವಾಗಿ ಅಧ್ಯಯನ ಮಾಡಲಾಗಿದೆ.
ಎಸ್ . ಪಿ.ವಿ ಹಳಕಟ್ಟಿ ರವರ ಸಂಶೋಧನೆಯ ನರಗುಂದ ತಾಲೂಕಿನ ವಾಸನದ ಚಂಡಸಿರಿ ಶಾತಕರ್ಣಿಯ ಶಾಸನ (ಕ್ರಿ.ಶ.3ನೇ ಶತಮಾನ)
ಹಿರೇಹಡಗಲಿಯ ಪಲ್ಲವ ಶಿವ ಸ್ಕಂದವರ್ಮನ ಶಾಸನ (ಕ್ರಿ.ಶ.3ನೇ ಶತಮಾನ)
ಸಿರಿ ಪುಲುಮಾವಿಯ ಶಾಸನ (ಕ್ರಿ.ಶ.3 ನೇ ಶತಮಾನ)
ಚಿತ್ರದುರ್ಗದ ತಮಟಕಲ್ಲು ಶಾಸನ (ಕ್ರಿ.ಶ.4ನೇ ಶತಮಾನ))
ಹಲ್ಮಿಡಿ ಶಾಸನ (ಕ್ರಿ.ಶ 450)
ಎರಡನೇ ಪುಲಕೇಶಿಯ ಐಹೊಳೆ ಶಾಸನ (ಕ್ರಿ.ಶ. 634)
ಇದರ ಜೊತೆಗೆ ಕನಗನಹಳ್ಳಿ ಶಾಸನಗಳು ಹಾಗೂ ಮಳವಳ್ಳಿಯ ಶಾಸನಗಳ ಲಿಪಿಗಳೊಂದಿಗೆ ತುಲನಾತ್ಮಕ ಸೂಕ್ಷ್ಮ ಅಧ್ಯಯನ ನಡೆಸಿರುವ ಶ್ರೀ ಕೇಶವ ಸರ್ ರವರು ಈ ಶಾಸನವು ಹಲ್ಮಿಡಿ ಶಾಸನಕ್ಕಿಂತ 50 ರಿಂದ 75 ವರುಷ ಹಿಂದಿನದೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ತಮಟಕಲ್ಲು ಶಾಸನದ ಅಧ್ಯಯನಕಾರರಾದ ಶ್ರೀ ಡಾ.ಬಿ.ರಾಜಶೇಖರಪ್ಪನವರೂ ಸಹ ತಾಳಗುಂದದ ಈ ಶಾಸನ ಖಂಡಿತವಾಗಿ ಅದಕ್ಕಿಂತ (ತಮಟಕಲ್ಲು) ಫೂರ್ವದೆಂದು ಅಭಿಪ್ರಾಯ ತಿಳಿಸಿದ್ದಾರೆ.
ಈ ಶಾಸನದ ಪಾಠ ಸಿದ್ಧಪಡಿಸಲು ಮತ್ತು ಇದರ ಕಾಲ ನಿರ್ಣಯಿಸಲು ಶ್ರೀ ಕೇಶವ ಸರ್ ರವರು ತುಂಬಾ ಅದ್ಭುತ ಶ್ರಮವಹಿಸಿದ್ದಾರೆ.
ಈ ಶಾಸನವು ಏಳು ಸಾಲಿನ ಶಾಸನವಾಗಿದ್ದು ಇದರಲ್ಲಿ ಸ್ಪಷ್ಟ ಕನ್ನಡ ಪದಗಳ ಉಲ್ಲೇಖಗಳಿವೆ. "ಕೊಟ್ಟಾರ್" "ಬೋಯ್ಗರಾ" " ಪುಲಂದಿಗೆ '' "ನಾಲ್ಕು" ಮತ್ತು "ಕೊಳ್ಳೆ" ಎಂಬ ಕನ್ನಡ ಪದಗಳ ಜೊತೆಗೆ " ಹಲಮಿ"ಯಂತಹ ಸಂಸ್ಕೃತದ ಪದ ಕೂಡ ಇದೆ. ಕನ್ನಡ ಪದಗಳು ಹೆಚ್ಚಿರುವ ಈ ಶಾಸನವನ್ನು ವಿಶೇಷ ಆಸಕ್ತಿವಹಿಸಿ, ಕನ್ನಡದ ಲಿಖಿತ ಇತಿಹಾಸದ ಪೂರ್ವತೆಯನ್ನು ಸುಮಾರು 70 - 80ವರುಷಗಳ ಹಿಂದಿಕ್ಕೆ ಒಯ್ಯುವುದರ ಮೂಲಕ ಕನ್ನಡಿಗರಿಗೆ ಈ ನಾಡಿನ ಸಮಸ್ತ ಸಾಹಿತ್ಯಾಭಿಮಾನಿಗಳಿಗೆ ಈ ನೆಲದ ಪವಿತ್ರತೆಯನ್ನು ತಿಳಿಸಿಕೊಟ್ಟ ಶ್ರೀ ಕೇಶವ ಸರ್ ರವರಿಗೆ ತುಂಬು ಹೃದಯದ ಧನ್ಯವಾದಗಳು

Super
ReplyDeleteಸೂಫರ್
ReplyDeleteAmazing
ReplyDelete